Monday, 30 October 2017

Lakshmikanthaswamy temple at Hedatale, Nanjangud

ಹೆಡತಲೆ ಶ್ರೀಲಕ್ಷ್ಮೀಕಾಂತಸ್ವಾಮಿ ದೇವಾಲಯ

ಚಿತ್ರ ಲೇಖನ :ಟಿ.ವಿ. ನಟರಾಜ ಪಂಡಿತ್
Hedetale Templeಶ್ರೀಕಂಠನ ನೆಲೆವೀಡು ನಂಜನಗೂಡಿಗೆ ಸಮೀಪದಲ್ಲೇ ಇರುವ ಮತ್ತೊಂದು ಪುಣ್ಯಕ್ಷೇತ್ರ ಹೆಡತಲೆ. ನಂಜನಗೂಡಿನಿಂದ ಚಾಮರಾಜನಗರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಸಾಗಿದರೆ ಹತ್ತನೆ ಮೈಲಿಗಲ್ಲಿನ ಬಳಿ ತಿರುಗಿದರೆ ಎರಡು ಕಿಲೋ ಮೀಟರು ದೂರದಲ್ಲಿ ಸಿಗುವುದೇ ಹೆಡತಲೆ.
ಈ ಊರಿಗೆ ಹೆಡೆತಲೆ ಎಂಬ ಹೆಸರು ಬಂದ ಬಗ್ಗೆ ಪುರಾಣದಲ್ಲಿ ಒಂದು ಕಥೆ ಇದೆಯಂತೆ. ಹಿಂದೆ ಈ ಕ್ಷೇತ್ರ ಕೌಂಡಿನ್ಯ ಮಹರ್ಷಿಗಳ ತಪೋಭೂಮಿಯಾಗಿತ್ತು. ಹೀಗಾಗಿ ಈ ಕ್ಷೇತ್ರಕ್ಕೆ ಕೌಂಡಿನ್ಯ ಕ್ಷೇತ್ರ ಎಂದೇ ಹೆಸರು ಬಂದಿತ್ತು. ಇಲ್ಲಿ ಋಷಿ ಮುನಿಗಳು ಯಜ್ಞ ಯಾಗಾದಿಗಳನ್ನು ಮಾಡುತ್ತಿದ್ದಾಗ ರಾಕ್ಷಸರು ಬಂದು ಅಡಚಣೆ ಉಂಟು ಮಾಡುತ್ತಿದ್ದರು. ರಾಕ್ಷಸರ ಕಾಟ ಸಹಿಸಲಾರದೆ ಋಷಿಮುನಿಗಳು ಶ್ರೀಮನ್ನಾರಾಯಣನ ಮೊರೆ ಹೋದರು. ತಮ್ಮನ್ನು ಕಾಪಾಡುವಂತೆ ಬೇಡಿಕೊಂಡರು. ಪ್ರಸನ್ನನಾದ ನಾರಾಯಣ ಭೂಲೋಕಕ್ಕೆ ಬಂದು ತನ್ನ ಸುದರ್ಶನ ಚಕ್ರದಿಂದ ರಾಕ್ಷಸರನ್ನು ಸಂಹಾರ ಮಾಡಿದ. ಈ ಸಂದರ್ಭದಲ್ಲಿ ರಾಕ್ಷಸನ ತಲೆಯ ಎಡಭಾಗವು ಈ ಗ್ರಾಮದಲ್ಲಿ ಬಂದು ಬಿತ್ತಂತೆ. ಎಡ ಭಾಗದ ತಲೆ ಬಂದು ಬಿದ್ದ ಊರು ಎಡತಲೆ ಎಂದೇ ಖ್ಯಾತವಾಯಿತು. ಕಾಲಾನಂತರದಲ್ಲಿ ಅಪ್ರಭ್ರಂಶವಾಗಿ ಹೆಡತಲೆಯಾಯಿತು ಎನ್ನುತ್ತಾರೆ ಊರ ಹಿರಿಯರು.
ಅದೇ ರೀತಿ ರಾಕ್ಷಸನ ಕಾಲಿನ ಭಾಗ ಹೋಗಿ ಮತ್ತೊಂದು ಊರಿನಲ್ಲಿ ಬಿತ್ತು. ರಾಕ್ಷಸನ ಆ ಕಾಲು ದೊಡ್ಡ ಮರ (ಹೆಮ್ಮರ)ದಂತೆ ಕಾಣುತ್ತಿದ್ದ ಕಾರಣ ಆ ಊರಿನ ಹೆಮ್ಮರಗಾಲು ಎಂಬ ಹೆಸರು ಬಂತು. ಈಗ ಅದು ಹೆಮ್ಮರಗಾಲವಾಗಿದೆ.
ಈ ಊರು ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಕರಾದ ಶ್ರೀರಂಗಪ್ರಿಯ ಸ್ವಾಮಿಗಳ ಜನ್ಮಸ್ಥಳವೂ ಹೌದು. ಈ ಪುರಾಣ ಪ್ರಸಿದ್ಧ ಸ್ಥಳದಲ್ಲಿ ಹೊಯ್ಸಳರು ಶ್ರೀಲಕ್ಷ್ಮೀಕಾಂತ ಸ್ವಾಮಿ ದೇವಾಲಯವನ್ನು ನಿರ್ಮಿಸಿದ್ದಾರೆ. ಮೂರು ಗೋಪುರ, ಮೂರು ಗರ್ಭಗುಡಿಯನ್ನು ಹೊಂದಿರುವ ಈ ದೇವಾಲಯ ತ್ರಿಕೂಟಾಚಲವಾಗಿ ಪ್ರಸಿದ್ಧಿ ಪಡೆದಿದೆ.
ಕ್ರಿಸ್ತಶಕ 1282ರಲ್ಲಿ ನಿರ್ಮಿಸಿದ್ದೆಂದು ಹೇಳಲಾಗುವ ಈ ದೇವಾಲಯ ಪೂರ್ವಾಭಿಮುಖವಾಗಿದೆ. ಆದರೆ ಒಂದು ಗರ್ಭಗೃಹದಲ್ಲಿರುವ ಶ್ರೀ ಲಕ್ಷ್ಮೀಕಾಂತಸ್ವಾಮಿ ಇಲ್ಲಿ ದಕ್ಷಿಣಾಭಿಮುಖನಾಗಿದ್ದಾನೆ.  ಮತ್ತೊಂದು ಗರ್ಭಗೃಹದಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಇದ್ದು ಈ ವಿಗ್ರಹ ಉತ್ತರಾಭಿಮುಖವಾಗಿದೆ. ಮೂರನೆಯ ಗರ್ಭಗೃಹದಲ್ಲಿ ಶ್ರೀ ವೇಣುಗೋಪಾಲಸ್ವಾಮಿ ಮೂರ್ತಿ ಇದೆ.
ಈ ಮೂರು ಗರ್ಭಗೃಹ ಹಾಗೂ ಶಿಲಾಮೂರ್ತಿಗಳು ಹೊಯ್ಸಳರ ವಾಸ್ತುಶಿಲ್ಪಕ್ಕೆ ಹಿಡಿದ ಕನ್ನಡಿಯಾಗಿವೆ. ಕಲಾಶ್ರೀಮಂತಿಕೆಯಿಂದ ಕೂಡಿರುವ ವಿಗ್ರಹಗಳ ಹಿಂದಿರುವ ಪ್ರಭಾವಳಿಯಲ್ಲಿ ದಶಾವತಾರದ ಕೆತ್ತನೆ ಇದೆ. ಹಜಾರದ ಮಧ್ಯ ಭಾಗದಲ್ಲಿ ನಿಂತರೆ ಮೂರೂ ದೇವರುಗಳ ದರ್ಶನವಾಗುವ ರೀತಿಯಲ್ಲಿ ದೇವಾಲಯ ನಿರ್ಮಿಸಲಾಗಿದೆ.
ಈಶಾನ್ಯ ಮೂಲೆಯಲ್ಲಿ ಆಂಡಾಳ್ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀ ಲಕ್ಷ್ಮೀಕಾಂತಸ್ವಾಮಿಯು ಶಂಖ, ಚಕ್ರ, ಗದಾ, ಪದ್ಮಧಾರಿಯಾಗಿದ್ದು ಈ ವಿಗ್ರಹ ಮನಮೋಹಕವಾಗಿದೆ.

ಶ್ರೀಲಕ್ಷ್ಮೀನರಸಿಂಹಸ್ವಾಮಿ ತನ್ನ ಎಡತೊಡೆಯ ಮೇಲೆ ಶ್ರೀಮಹಾಲಕ್ಷ್ಮಿಯನ್ನು ಕೂರಿಸಿಕೊಂಡಿದ್ದು ನರಸಿಂಹಸ್ವಾಮಿ ಶಾಂತಸ್ವರೂಪಿಯಾಗಿದ್ದಾನೆ. ಇನ್ನು ಶ್ರೀ ವೇಣುಗೋಪಾಲ ಸ್ವಾಮಿ ಕೊಳಲು ನುಡಿಸುತ್ತಿದ್ದು ಪ್ರಭಾವಳಿಯಲ್ಲಿ  ರುಕ್ಮಿಣಿ ಸತ್ಯಭಾಮೆ ಹೂಗ ಗೋವುಗಳನ್ನು ಶಿಲ್ಪಿ ಕಡೆದಿದ್ದಾನೆ. ಅತ್ಯಂತ ಪ್ರಾಚೀನವಾದ ಈ ದೇವಾಲಯ ನೋಡಲೇ ಬೇಕಾದ ಪುಣ್ಯಕ್ಷೇತ್ರ.  

Chatachattihalli Trikootachala

ಅವಸಾನದ ಅಂಚಿನಲ್ಲಿ ಚಟಚಟ್ಟಿಹಳ್ಳಿಯ ತ್ರಿಕೂಟಾಚಲ

Chatachittanahalli Trikutachala, Hassan,*ಟಿ.ವಿ.ನಟರಾಜ ಪಂಡಿತ್
ದೇವಾಲಯಗಳು ನಮ್ಮ ಕಲಾಶ್ರೀಮಂತಿಕೆಗೆ, ವಾಸ್ತು ವೈಭವಕ್ಕೆ ಎಲ್ಲಕ್ಕಿಂತ ಮಿಗಿಲಾಗಿ ನಮ್ಮ, ಸಂಸ್ಕೃತಿ ಪರಂಪರೆಯ ಪ್ರತೀಕಗಳಾಗಿವೆ. ಆದರೆ, ನಾಡಿನ ಹಲವು ಅಮೂಲ್ಯ ದೇವಾಲಯಗಳು ಸ್ಥಳೀಯರ, ಮುಜರಾಯಿ ಇಲಾಖೆಯ, ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ಅವಸಾನದ ಅಂಚಿನಲ್ಲಿವೆ. ಇಂಥ ಒಂದು ಅಪೂರ್ವ ದೇವಾಲಯಗಳ ಪೈಕಿ ಒಂದು ಬೇಲೂರು ತಾಲೂಕು, ಹಳೇಬೀಡು ಹೋಬಳಿ ಚಟಚಟ್ಟಿಹಳ್ಳಿಯ ತ್ರಿಕೂಟಾಚಲ ದೇವಾಲಯ.
Chatachittanahalli Trikutachala, Hassan,ಹಳೇಬೀಡಿನಿಂದ ಕೇವಲ 4 ಕಿಲೋ ಮೀಟರ್ ದೂರದಲ್ಲಿರುವ ಈ ಗ್ರಾಮದಲ್ಲಿ ಹೊಯ್ಸಳರ ಅರಸು 2ನೇ ನರಸಿಂಹ ಬಲ್ಲಾಳನ ಕಾಲದಲ್ಲಿ ನಿರ್ಮಿತವಾದ 3 ಗರ್ಭಗೃಹ ಹಾಗೂ 3 ಗೋಪುರಗಳುಳ್ಳ ದೇವಾಲಯವಿದೆ. ಇಲ್ಲಿ ದೊರೆತಿರುವ ಶಾಸನದಲ್ಲಿ 2ನೇ ನರಸಿಂಹ ಬಲ್ಲಾಳನ ಸೇನಾಧಿಪತಿ ಚಟ್ಟಯ್ಯ ಪೆರುಮಾಳ್ ದಾಸಶೆಟ್ಟೀಕೆರೆಯನ್ನು ಕ್ರಿ.ಶ.1221ರಲ್ಲಿ ನಿರ್ಮಿಸಿದನೆಂದೂ ತಿಳಿದುಬರುತ್ತದೆ. 57 ಎಕರೆ ವಿಸ್ತೀರ್ಣ ಹೊಂದಿರುವ ಈ ದೊಡ್ಡ ಕೆರೆಯ ಅಂಚಿನಲ್ಲಿ ಆತನೇ ಈ ತ್ರಿಕೂಟಾಚಲ ನಿರ್ಮಿಸಿದ್ದಾನೆ ಎಂದು ತಿಳಿದುಬರುತ್ತದೆ.
Chatachittanahalli Trikutachala, Hassan,3 ಗರ್ಭಗೃಹಗಳ ಪೈಕಿ ಪ್ರಧಾನ ಗರ್ಭಗುಡಿಯಲ್ಲಿ ಚಟಚಟ್ಟೇಶ್ವರಲಿಂಗ, 2ನೇ ಗರ್ಭಗೃಹದಲ್ಲಿ ಹರಿಹರ ಹಾಗೂ 3ನೇ ಗರ್ಭಗೃಹದಲ್ಲಿ ಸೂರ್ಯನಾರಾಯಣ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.
6 ಅಡಿ ಎತ್ತರ ಇರುವ ಸೂರ್ಯನಾರಾಯಣನ ವಿಗ್ರಹ ಆ ಕಾಲದಲ್ಲಿ ಸೂರ್ಯಾರಾಧನೆ ಇತ್ತೆಂಬುದಕ್ಕೆ, ಜೀವರಾಶಿಗಳಿಗೆಲ್ಲಾ ಚೈತನ್ಯ ನೀಡುವ ಸೂರ್ಯನ ಪೂಜೆಯ ಪದ್ಧತಿಗೆಸಾಕ್ಷಿಯಾಗಿ ನಿಂತಿದೆ. ಒಂದೇ ದೇವಾಲಯದಲ್ಲಿ ಹರಿ ಹರರನ್ನು ಪ್ರತಿಷ್ಠಾಪಿಸಿ ಶೈವ, ವೈಷ್ಣವರಲ್ಲಿ ಭೇದವಿಲ್ಲ ಎಂದು ಸಾರುವ ಪ್ರಯತ್ನವನ್ನು ಮಾಡಲಾಗಿದೆ. ಹರಿಹರಕ್ಷೇತ್ರವೆಂದೇ ಖ್ಯಾತವಾದ ಇದು ಸಾಮರಸ್ಯದ ಸಂಕೇತವಾಗಿದೆ.
ಪ್ರಾಚೀನವಾದ ಈ ದೇವಾಲಯದ ಭಿತ್ತಿಗಳಲ್ಲಿ ಸೂಕ್ಷ್ಮೆ ಕೆತ್ತನೆಗಳಿಲ್ಲದಿದ್ದರೂ, ಅರೆಗಂಬಗಳಿವೆ. ಆಧಾರಕ್ಕೆ ನೀಡಿರುವ ಕಂಬಗಳಲ್ಲಿರುವ ಕೆತ್ತನೆ ಸುಂದರವಾಗಿದೆ. ಜಾಲಂದ್ರ, ಸುಖನಾಸಿ, ಭುವನೇಶ್ವರಿ, ಗರ್ಭಗೃಹ, ನವರಂಗದ ಮೇಲ್ಛಾವಣಿಗಳಲ್ಲಿ ಭವ್ಯವಾದ ಕೆತ್ತನೆಗಲಿವೆ.
Chatachittanahalli Trikutachala, Hassan,3 ಗೋಪುರಗಳ ಪೈಕಿ ಒಂದು ಗೋಪುರ ಈಗಾಗಲೇ ಕುಸಿದಿದ್ದು, ಇನ್ನೆರೆಡು ಗೋಪುರಗಳೂ ಬೀಳುವ ಹಂತದಲ್ಲಿವೆ. ಗೋಡೆಗಳಲ್ಲಿ ಬಿರುಕು ಉಂಟಾಗಿದೆ. ಇಂಥ ಐತಿಹಾಸಿಕ ದೇವಾಲಯದ ಸುತ್ತ ಈಗ ಗಿಡಗಂಟಿ ಬೆಳೆದು ಪ್ರವೇಶವೂ ದುರ್ಗಮವಾಗಿದೆ. ಈ ಹಿನ್ನೆಲೆಯಲ್ಲಿ ದೇವಾಲಯವನ್ನು ಜೀರ್ಣೋದ್ಧಾರ ಮಾಡುವಂತೆ ರಾಷ್ಟ್ರಗೌರವ ಸಂರಕ್ಷಣಾ ಪರಿಷತ್ ಆಗ್ರಹಿಸಿದ್ದು, ಜನಜಾಗೃತಿ ಉಂಟು ಮಾಡಿ, ಈಗ ದೇವಾಲಯದ ಜೀರ್ಣೋದ್ಧಾರಕ್ಕೂ ಶ್ರಮಿಸುತ್ತಿದೆ.

ಈಗ ಗ್ರಾಮಸ್ಥರೂ ತಮ್ಮ ಊರಿನ ಈ ಭವ್ಯ ದೇವಾಲಯ ಉಳಿಸಿಕೊಳ್ಳಲು ಆಸಕ್ತರಾಗಿದ್ದು, ಶಿಥಿಲಾವಸ್ತೆಯಲ್ಲಿರುವ ದೇಗುಲ ಮತ್ತೆ ತನ್ನ ಹಳೆಯ ವೈಭವ ಪಡೆಯುವುದೆಂಬ ಆಶಯ ನಮ್ಮದು.

Adaguru Lakshminarayana temple

ಶೈವ, ವೈಷ್ಣವ, ಜೈನ ಕ್ಷೇತ್ರ - ಅಡಗೂರು
*ಟಿ.ವಿ.ನಟರಾಜಪಂಡಿತ್
ಅಡಗೂರು ಕಲ್ಲೇಶ್ವರ, ಲಕ್ಷ್ಮೀನಾರಾಯಣ, ಬಸದಿ, ವರ್ಧಮಾನ, ಹಾಸನ, ಬೇಲೂರು, Hassan, Belur, Adagur, Kalleswara, Ganesha, Temple, Hoysala.ಜಗದ್ವಿಖ್ಯಾತ ದೇವಾಲಯಗಳ ಬೀಡು ಹಾಸನದ ಜಿಲ್ಲಾ ಕೇಂದ್ರದಿಂದ ಶಿಲಾಬಾಲಿಕೆಯರ ನಾಡು ಹಳೇಬೀಡಿಗೆ ಹೋಗುವ ಮಾರ್ಗದಲ್ಲಿ ಹಳೇಬೀಡಿಗೆ 9 ಕಿಲೋ ಮೀಟರ್ ದೂರದಲ್ಲಿರುವ ಊರು ಅಡಗೂರು.
ಚಂದ್ರದ್ರೋಣ ಪರ್ವತ ಶ್ರೇಣಿಯಿಂದ ಸುತ್ತುವರಿದ ಅಡಗೂರು ಅರೆಮಲೆನಾಡಿನ ಪುಟ್ಟಗ್ರಾಮ. ಈ ಗ್ರಾಮದಲ್ಲಿ ವಿಶಾಲ ಕೆರೆಯ ಸಮೀಪದಲ್ಲಿ 12-13ನೇ ಶತಮಾನದ ಆದಿ ಭಾಗದಲ್ಲಿ ನಿರ್ಮಿಸಿದ ದೇವಾಲಯಗಳು ಮನಮೋಹಕವಾಗಿವೆ.
ಬಹುಧರ್ಮ ಸಮನ್ವಯ ಕ್ಷೇತ್ರವಾದ ಈ ಗ್ರಾಮದಲ್ಲಿ ಶ್ರೀ ಲಕ್ಷ್ಮೀನಾರಾಯಣ, ಶ್ರೀ ಕಲ್ಲೇಶ್ವರ ಹಾಗೂ ಶ್ರೀ ವರ್ಧಮಾನ ಬಸದಿಗಳಿವೆ. ಹಿಂದೆ ಇದು ಜಿನ ಕ್ಷೇತ್ರವಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿಯೂ ನಿಂತಿದೆ.
ಅಡಗೂರು ಗ್ರಾಮದ ಉತ್ತರ ಭಾಗದಲ್ಲಿ ಹೊಯ್ಸಳ ವಾಸ್ತು ವೈಭವದಿಂದ ಕೂಡಿದ ಶ್ರೀಲಕ್ಷ್ಮೀನಾರಾಯಣ ದೇವಾಲಯವಿದೆ. ಈ ದೇವಾಲಯ ಕೂಡ ಹೊಯ್ಸಳ ಶೈಲಿಯ ಇತರ ದೇವಾಲಯಗಂತೆ ನಕ್ಷತ್ರಾಕಾರದ ಜಗಲಿಯ ಮೇಲಿದೆ. ಮುಖಮಂಟಪ, ಸುಖನಾಶಿ, ಭುವನೇಶ್ವರಿ, ಗರ್ಭಗೃಹ, ಜಾಲಂದ್ರಗಳು ಇಲ್ಲಿವೆ. ಹೊರ ಬಿತ್ತಿಗಳಲ್ಲಿ ಸೂಕ್ಷ್ಮ ಕೆತ್ತನೆಗಳಿಲ್ಲ ಎನ್ನುವುದನ್ನು ಬಿಟ್ಟರೆ ಉಳಿದಂತೆ ಹೊಯ್ಸಳರ ಕಾಲದ ದೇವಾಲಯ ಎಂಬುದನ್ನು ಇದು ಅಡಗೂರು ಕಲ್ಲೇಶ್ವರ, ಲಕ್ಷ್ಮೀನಾರಾಯಣ, ಬಸದಿ, ವರ್ಧಮಾನ, ಹಾಸನ, ಬೇಲೂರು, Hassan, Belur, Adagur, Kalleswara, Ganesha, Temple, Hoysala.ಹೊರನೋಟದಿಂದಲೇ ಸಾಬೀತುಪಡಿಸುತ್ತದೆ.  ಮೂರು ಗರ್ಭಗುಡಿ, ಮೂರು ಗೋಪುರ ಹೊಂದಿರುವ ಈ ದೇವಾಲಯ ತ್ರಿಕೂಟಾಚಲ. ದೇವಾಲಯ ಪೂರ್ವಾಭಿಮುಖವಾಗಿದ್ದು, 10-11ನೇ ಶತಮಾನದಲ್ಲೇ ಇದರ ನಿರ್ಮಾಣವಾಗಿದೆ ಎಂದು ತಜ್ಞರು ಊಹಿಸುತ್ತಾರೆ. ಶಾಸನಗಳಲ್ಲಿ ಇಲ್ಲಿನ ದೇವರಿಗೆ ವಡಗು ನಾರಾಯಣ ಎಂಬ ಉಲ್ಲೇಖವಿದೆ.
ಮಧ್ಯದ ಪ್ರಧಾನ ಗರ್ಭಗೃಹದಲ್ಲಿ ಶ್ರೀಲಕ್ಷ್ಮೀನಾರಾಯಣನ ಮನಮೋಹಕ ವಿಗ್ರಹವಿದೆ. ಎಡ ಮತ್ತು ಬಲ ಭಾಗದಲ್ಲಿರುವ ಗರ್ಭಗೃಹಗಳಲ್ಲಿ ಶ್ರೀ ವೇಣುಗೋಪಾಲ ಮತ್ತು ತಾಯಿ ಸರಸ್ವತಿಯ ವಿಗ್ರಹಗಳಿವೆ. ಈ ಶಿಲ್ಪಗಳಲ್ಲಿ ಹೊಯ್ಸಳ ವಾಸ್ತು ಶಿಲ್ಪದ ವೈಭವ ಎದ್ದು ಕಾಣುತ್ತದೆ.
ಇತಿಹಾಸಜ್ಞರು ಊಹಿಸುವ ರೀತ್ಯ ಕದಂಬ ವಂಶದ ಪತನಾ ನಂತರ ಚದುರಿದ ಕದಂಬ ವಂಶೀಯರು ಸಕಲೇಶಪುರದಲ್ಲಿ ಬಂದು ನೆಲೆಸಿದರು. ಇವರನ್ನು ಉತ್ತರ ಕದಂಬ ವಂಶೀಯರು ಎಂದು ಹೇಳಲಾಗುತ್ತದೆ. ಇವರು 10-11ನೇ ಶತಮಾನದಲ್ಲಿ ಈ ದೇವಾಲಯ ನಿರ್ಮಿಸಿದ್ದಾರೆ. ತದ ನಂತರ 12-13ನೇ ಶತಮಾನದಲ್ಲಿ ಇದನ್ನು ಹೊಯ್ಸಳರು ಪುನರ್ನಿರ್ಮಾಣ ಮಾಡಿದ್ದಾರೆ.
ಅಡಗೂರು ಕಲ್ಲೇಶ್ವರ, ಲಕ್ಷ್ಮೀನಾರಾಯಣ, ಬಸದಿ, ವರ್ಧಮಾನ, ಹಾಸನ, ಬೇಲೂರು, Hassan, Belur, Adagur, Kalleswara, Ganesha, Temple, Hoysala.ಊರಿನ ಕೋಟೆಯ ದ್ವಾರಕ್ಕೆ ಹೊಂದಿಕೊಂಡಂತಿರುವ ಜಟಾಮುಡಿಧಾರಿಯಾಗಿರುವ ಶ್ರೀಗಣೇಶನ ಬೃಹತ್ ವಿಗ್ರಹವಿದೆ. ವರಪ್ರದ ಗಣಪ ಎಂದು ಖ್ಯಾತನಾಗಿರುವ ಈ ಗಣಪ ಪ್ರವಾಸಿಗರ ಕೇಂದ್ರಬಿಂದು.
ಊರಿನಲ್ಲಿ ಕಲ್ಲೇಶ್ವರ ಸ್ವಾಮಿಯ ದೇವಾಲಯವೂ ಇದೆ.

ಈ ದೇವಾಲಯಕ್ಕೆ ಸಮೀಪದಲ್ಲೇ ಇರುವ ಶ್ರೀವರ್ಧಮಾನ ಬಸದಿಯೂ ಸುಂದರವಾಗಿದೆ. ವೈಷ್ಣವ, ಶೈವ ಹಾಗೂ ಜೈನ ಸಂಪ್ರದಾಯದ ತವರಾಗಿ ಭಾವೈಕ್ಯತೆಯ ಬೀಡಾಗಿತ್ತು ಅಡಗೂರು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.  ದೇವಾಲಯದ ಒಳಗೆ ವೃತ್ತಾಕಾರದ ಕಲ್ಲುಕಂಬಗಳಿವೆ. ಗರ್ಭಗೃಹದಲ್ಲಿ ಶ್ರೀವರ್ಧಮಾನರ ಸುಂದರ ಮೂರ್ತಿಯಿದೆ.

Kadaluru Channakeshava

ಅಳಿವಿನಂಚಿನಲ್ಲಿ ಕಡಲೂರು ಚನ್ನಕೇಶವ ದೇವಾಲಯ

hirekadalur temple, channakeshava, hassan*ಲೇಖಕರು:ಟಿ.ವಿ.ನಟರಾಜ ಪಂಡಿತ್
 ಹೊಯ್ಸಳ ದೊರೆಗಳ ಕಲೋಪಾಸನೆ ಹಾಗೂ ದೈವಭಕ್ತಿಯ ಫಲವಾಗಿ ಕರ್ನಾಟಕ ವಿಶಿಷ್ಟ ಹಾಗೂ ಕಲಾಶ್ರೀಮಂತಿಕೆಯಿಂದ ಕೂಡಿದ ದೇವಾಲಯಗಳ ತವರಾಗಿದೆ.  ಆದರೆ ಇಂದು ಹೊಯ್ಸಳ ದೊರೆಗಳು ಕಟ್ಟಿಸಿದ ಅನೇಕ ದೇವಾಲಯಗಳು ಸರ್ಕಾರದ ಅವಕೃಪೆ ಹಾಗೂ ಸ್ಥಳೀಯರ ಅನಾದರದಿಂದಾಗಿ ಅಳಿವಿನ ಅಂಚಿನಲ್ಲಿವೆ. ಇಂಥ ಒಂದು ದೇವಾಲಯಗಳಲ್ಲಿ ಹಾಸನ ಜಿಲ್ಲೆ ದುದ್ದ ಹೋಬಳಿಯ ಹಿರೆಕಡಲೂರಿನ ಚನ್ನಕೇಶವ ದೇವಾಲಯವೂ ಒಂದು.
ಶಾಸನಗಳ ರೀತ್ಯ ಹಿಂದೆ ಈ ಊರಿಗೆ ಅರುಂಧತಿ ಪುರ ಎಂಬ ಹೆಸರಿತ್ತು. ಇಲ್ಲಿ ಹೊಯ್ಸಳರ ಅರಸು 2ನೇ ವೀರ ನರಸಿಂಹನ ಕಾಲದಲ್ಲಿ ಈ ದೇವಾಲಯ ನಿರ್ಮಿಸಲಾಯಿತು. ಈ ದೇಗುಲ ಕೂಡ ಇತರ ಹೊಯ್ಸಳ ದೇವಾಲಯಗಳಂತೆ ನಕ್ಷತ್ರಾಕಾರದ ಜಗತಿಯ ಮೇಲೆ ನಿರ್ಮಾಣವಾಗಿದೆ. ದೇವಾಲಯದಲ್ಲಿ ಮುಖಮಂಟಪ, ಸುಖನಾಸಿ, ಜಾಲಂದ್ರ, ಭುವನೇಶ್ವರಿ ಹಾಗೂ hirekadalur temple, channakeshava, hassanಗರ್ಭಗೃಹವಿದೆ. ಗರ್ಭಗೃಹದಲ್ಲಿ ಎರಡು ಅಡಿಯ ಪಾಣಿಪೀಠದ ಮೇಲೆ ಆಳೆತ್ತರದ ಸುಂದರ ಚನ್ನಕೇಶವ ಸ್ವಾಮಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.
ಶಾಂತಸ್ವರೂಪಿಯಾದ ಚನ್ನಕೇಶವನ ಕೈಯಲ್ಲಿರುವ ಶಂಖದಲ್ಲಿ ಶಿಲ್ಪಿ ತನ್ನ ಕಲಾ ನೈಪುಣ್ಯತೆಯನ್ನು ಮೆರೆದಿದ್ದಾನೆ. ಪಾಣಿಪೀಠದಲ್ಲಿ ಗರುಡನ ಚಿತ್ರವಿದೆ.
 ಆದರೆ ಇಂದು ದೇಗುಲದ ಸುತ್ತಲೂ ಗಿಡ ಗಂಟಿಗಳು ಬೆಳೆದಿವೆ. ಗೋಪುರ ಮಣ್ಣಿನಿಂದ ಮುಚ್ಚಿಹೋಗಿ ಕುಸಿಯುವ ಸ್ಥಿತಿಯಲ್ಲಿದೆ. ಇಂಥ ಮನೋಹರವಾದ ದೇವಾಲಯವನ್ನು ಸಂರಕ್ಷಿಸಬೇಕು ಎಂದು ರಾಷ್ಟ್ರ ಗೌರವ ಸಂರಕ್ಷಣಾ ಪರಿಷತ್ ಮನವಿ ಮಾಡಿದೆ. ಈ ಸಂಬಂಧ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆ ಅವರ ಗಮನವನ್ನೂ ಸೆಳೆಯಲಾಗಿದೆ.
ಇಲ್ಲಿ ಹಿಂದೆ ರಂಗನಾಥ ಸ್ವಾಮಿಯ ವಿಗ್ರಹವನ್ನೂ ಪ್ರತಿಷ್ಠಾಪಿಸಲಾಗಿತ್ತು ಎಂಬ ಉಲ್ಲೇಖವಿದೆ. ಆದರೆ, ಇಂದು ಆ ವಿಗ್ರಹ ಕಾಣೆಯಾಗಿದೆ. ಸರ್ಕಾರ, ಮುಜರಾಯಿ ಇಲಾಖೆ, ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ಇನ್ನೂ ನಿರ್ಲಕ್ಷ್ಯ ತೋರಿದರೆ ಇರುವ ದೇವಾಲಯ, ವಿಗ್ರಹ ಹಾಗೂ ಅಮೂಲ್ಯ ಕಲಾ ಸಂಪತ್ತನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜನ ಜಾಗೃತಿ ಅತ್ಯಗತ್ಯ.

Panchajanya Kshetra Shankha @ Hassan

ಪಾಂಚಜನ್ಯ ಕ್ಷೇತ್ರ ಶಂಖ
*ಟಿ.ವಿ.ನಟರಾಜಪಂಡಿತ್
Shanka, Hassan, Chikmagalur, ಶಂಖ, ಚಿಕ್ಕಮಗಳೂರು, ಹಾಸನಬೆಂಗಳೂರು  ಚಿಕ್ಕಮಗಳೂರು ಹೆದ್ದಾರಿಯಲ್ಲಿ ಹಾಸನದಿಂದ 10 ಕಿ.ಮೀ. ದೂರದಲ್ಲಿರುವ ಅರೆಮಲೆನಾಡಿನ ಪುಟ್ಟ ಗ್ರಾಮ ಶಂಖ. ಪಾಂಚಜನ್ಯಪುರ ಎಂದೂ ಖ್ಯಾತವಾದ ಈ ಗ್ರಾಮದಲ್ಲಿರುವ ಪುಟ್ಟ ಗುಡ್ಡದ ಮೇಲೆ ನಾಲ್ಕು ಅಂಕಣದ ಪುಟ್ಟ ದೇವಾಲಯವಿದೆ. ಈ ದೇವಾಲಯದಲ್ಲಿ ಮುಖಮಂಟಪ, ಸುಖನಾಸಿ, ಗರ್ಭಗೃಹವಿದ್ದು, ಈ ದೇವಾಲಯ ಸುಮಾರು 900 ವರ್ಷಗಳಷ್ಟು ಪಾರಾತನವಾದದ್ದು ಎಂದು ತಿಳಿದುಬಂದಿದೆ.
ಗರ್ಭಗೃಹದಲ್ಲಿ 6 ಅಡಿ ಎತ್ತರದ ಹೊಯ್ಸಳ ಶೈಲಿಯ ಶ್ರೀ ಚನ್ನಕೇಶವಸ್ವಾಮಿಯ ಸುಂದರ ವಿಗ್ರಹವಿದೆ. ಕೇಶವ ತನ್ನ ಎರಡು ಕೈಗಳಲ್ಲಿ ಶಂಖ, ಚಕ್ರಗಳನ್ನೂ ಮುಂದಿನ ಎರಡು ಕೈಗಳಲ್ಲಿ ಗದೆ ಹಾಗೂ ಪದ್ಮವನ್ನೂ ಹಿಡಿದಿದ್ದಾನೆ.
ಹಿಂದಿರುವ ಪ್ರಭಾವಳಿಯಲ್ಲಿ ಸುಂದರ, ಮೋಹಕ ಕೆತ್ತನೆಗಳಿವೆ.
ಭಕ್ತರ ಬಯಕೆಗಳನ್ನು ಸದಾ ಈಡೇರಿಸುವ ಈ ಕೇಶವನ ಮಹಿಮೆಯ ಬಗ್ಗ ಹಲವಾರು ಕಥೆಗಳಿವೆ. ಬಹು ಶಿಥಿಲವಾಗಿದ್ದ ಈ ದೇವಾಲಯ ಜೀರ್ಣೋದ್ಧಾರಕ್ಕಾಗಿ ಗ್ರಾಮಸ್ಥರು ಶ್ರೀ ಚನ್ನಕೇಶವ ವೈಷ್ಣವ ಸೇವಾ ಸಮಿತಿ ರಚಿಸಿ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆ ಅವರ ಮಾರ್ಗದರ್ಶನದಲ್ಲಿ ಹಾಗೂ ಧರ್ಮೋತ್ಥಾನ ಟ್ರಸ್ಟ್ ನೆರವಿನಿಂದ ದೇವಾಲಯಕ್ಕೆ ಕಾಯಕಲ್ಪ ನೀಡಿದ್ದಾರೆ.
ಈ ದೇವಾಲಯದ ಈಶಾನ್ಯ ಭಾಗದಲ್ಲಿ ಗುಹೆಯೊಂದಿದ್ದು, ಇಲ್ಲಿಂದ ಬೇಲೂರಿಗೆ ಹೋಗಲು ಸುರಂಗ ಮಾರ್ಗವಿದೆ ಎಂದೂ ಜನ ಹೇಳುತ್ತಾರೆ.
ದೇವಾಲಯಕ್ಕೆ ಹೊಯ್ಸಳರ ದೊರೆಗಳು ಅಪಾರವಾದ ನಗ, ನಾಣ್ಯ, ಪಂಚಲೋಹದ ವಿಗ್ರಹಗಳನ್ನು ನೀಡಿದ್ದಾರೆ. ಇಲ್ಲಿರುವ ತಟ್ಟೆ, ತಂಬಿಕೆ, ಹರಿವಾಣಗಳು ಪ್ರಾಚೀನತೆಯ ಸಂಕೇತವಾಗಿವೆ.