ಅವಸಾನದ ಅಂಚಿನಲ್ಲಿ ಚಟಚಟ್ಟಿಹಳ್ಳಿಯ ತ್ರಿಕೂಟಾಚಲ
ದೇವಾಲಯಗಳು ನಮ್ಮ ಕಲಾಶ್ರೀಮಂತಿಕೆಗೆ, ವಾಸ್ತು ವೈಭವಕ್ಕೆ ಎಲ್ಲಕ್ಕಿಂತ ಮಿಗಿಲಾಗಿ ನಮ್ಮ, ಸಂಸ್ಕೃತಿ ಪರಂಪರೆಯ ಪ್ರತೀಕಗಳಾಗಿವೆ. ಆದರೆ, ನಾಡಿನ ಹಲವು ಅಮೂಲ್ಯ ದೇವಾಲಯಗಳು ಸ್ಥಳೀಯರ, ಮುಜರಾಯಿ ಇಲಾಖೆಯ, ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ಅವಸಾನದ ಅಂಚಿನಲ್ಲಿವೆ. ಇಂಥ ಒಂದು ಅಪೂರ್ವ ದೇವಾಲಯಗಳ ಪೈಕಿ ಒಂದು ಬೇಲೂರು ತಾಲೂಕು, ಹಳೇಬೀಡು ಹೋಬಳಿ ಚಟಚಟ್ಟಿಹಳ್ಳಿಯ ತ್ರಿಕೂಟಾಚಲ ದೇವಾಲಯ.
6 ಅಡಿ ಎತ್ತರ ಇರುವ ಸೂರ್ಯನಾರಾಯಣನ ವಿಗ್ರಹ ಆ ಕಾಲದಲ್ಲಿ ಸೂರ್ಯಾರಾಧನೆ ಇತ್ತೆಂಬುದಕ್ಕೆ, ಜೀವರಾಶಿಗಳಿಗೆಲ್ಲಾ ಚೈತನ್ಯ ನೀಡುವ ಸೂರ್ಯನ ಪೂಜೆಯ ಪದ್ಧತಿಗೆಸಾಕ್ಷಿಯಾಗಿ ನಿಂತಿದೆ. ಒಂದೇ ದೇವಾಲಯದಲ್ಲಿ ಹರಿ ಹರರನ್ನು ಪ್ರತಿಷ್ಠಾಪಿಸಿ ಶೈವ, ವೈಷ್ಣವರಲ್ಲಿ ಭೇದವಿಲ್ಲ ಎಂದು ಸಾರುವ ಪ್ರಯತ್ನವನ್ನು ಮಾಡಲಾಗಿದೆ. ಹರಿಹರಕ್ಷೇತ್ರವೆಂದೇ ಖ್ಯಾತವಾದ ಇದು ಸಾಮರಸ್ಯದ ಸಂಕೇತವಾಗಿದೆ.
ಪ್ರಾಚೀನವಾದ ಈ ದೇವಾಲಯದ ಭಿತ್ತಿಗಳಲ್ಲಿ ಸೂಕ್ಷ್ಮೆ ಕೆತ್ತನೆಗಳಿಲ್ಲದಿದ್ದರೂ, ಅರೆಗಂಬಗಳಿವೆ. ಆಧಾರಕ್ಕೆ ನೀಡಿರುವ ಕಂಬಗಳಲ್ಲಿರುವ ಕೆತ್ತನೆ ಸುಂದರವಾಗಿದೆ. ಜಾಲಂದ್ರ, ಸುಖನಾಸಿ, ಭುವನೇಶ್ವರಿ, ಗರ್ಭಗೃಹ, ನವರಂಗದ ಮೇಲ್ಛಾವಣಿಗಳಲ್ಲಿ ಭವ್ಯವಾದ ಕೆತ್ತನೆಗಲಿವೆ.
ಈಗ ಗ್ರಾಮಸ್ಥರೂ ತಮ್ಮ ಊರಿನ ಈ ಭವ್ಯ ದೇವಾಲಯ ಉಳಿಸಿಕೊಳ್ಳಲು ಆಸಕ್ತರಾಗಿದ್ದು, ಶಿಥಿಲಾವಸ್ತೆಯಲ್ಲಿರುವ ದೇಗುಲ ಮತ್ತೆ ತನ್ನ ಹಳೆಯ ವೈಭವ ಪಡೆಯುವುದೆಂಬ ಆಶಯ ನಮ್ಮದು.
No comments:
Post a Comment