ಪಾಂಚಜನ್ಯ ಕ್ಷೇತ್ರ ಶಂಖ
*ಟಿ.ವಿ.ನಟರಾಜಪಂಡಿತ್
ಗರ್ಭಗೃಹದಲ್ಲಿ 6 ಅಡಿ ಎತ್ತರದ ಹೊಯ್ಸಳ ಶೈಲಿಯ ಶ್ರೀ ಚನ್ನಕೇಶವಸ್ವಾಮಿಯ ಸುಂದರ ವಿಗ್ರಹವಿದೆ. ಕೇಶವ ತನ್ನ ಎರಡು ಕೈಗಳಲ್ಲಿ ಶಂಖ, ಚಕ್ರಗಳನ್ನೂ ಮುಂದಿನ ಎರಡು ಕೈಗಳಲ್ಲಿ ಗದೆ ಹಾಗೂ ಪದ್ಮವನ್ನೂ ಹಿಡಿದಿದ್ದಾನೆ.
ಹಿಂದಿರುವ ಪ್ರಭಾವಳಿಯಲ್ಲಿ ಸುಂದರ, ಮೋಹಕ ಕೆತ್ತನೆಗಳಿವೆ.
ಭಕ್ತರ ಬಯಕೆಗಳನ್ನು ಸದಾ ಈಡೇರಿಸುವ ಈ ಕೇಶವನ ಮಹಿಮೆಯ ಬಗ್ಗ ಹಲವಾರು ಕಥೆಗಳಿವೆ. ಬಹು ಶಿಥಿಲವಾಗಿದ್ದ ಈ ದೇವಾಲಯ ಜೀರ್ಣೋದ್ಧಾರಕ್ಕಾಗಿ ಗ್ರಾಮಸ್ಥರು ಶ್ರೀ ಚನ್ನಕೇಶವ ವೈಷ್ಣವ ಸೇವಾ ಸಮಿತಿ ರಚಿಸಿ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆ ಅವರ ಮಾರ್ಗದರ್ಶನದಲ್ಲಿ ಹಾಗೂ ಧರ್ಮೋತ್ಥಾನ ಟ್ರಸ್ಟ್ ನೆರವಿನಿಂದ ದೇವಾಲಯಕ್ಕೆ ಕಾಯಕಲ್ಪ ನೀಡಿದ್ದಾರೆ.
ಈ ದೇವಾಲಯದ ಈಶಾನ್ಯ ಭಾಗದಲ್ಲಿ ಗುಹೆಯೊಂದಿದ್ದು, ಇಲ್ಲಿಂದ ಬೇಲೂರಿಗೆ ಹೋಗಲು ಸುರಂಗ ಮಾರ್ಗವಿದೆ ಎಂದೂ ಜನ ಹೇಳುತ್ತಾರೆ.
ದೇವಾಲಯಕ್ಕೆ ಹೊಯ್ಸಳರ ದೊರೆಗಳು ಅಪಾರವಾದ ನಗ, ನಾಣ್ಯ, ಪಂಚಲೋಹದ ವಿಗ್ರಹಗಳನ್ನು ನೀಡಿದ್ದಾರೆ. ಇಲ್ಲಿರುವ ತಟ್ಟೆ, ತಂಬಿಕೆ, ಹರಿವಾಣಗಳು ಪ್ರಾಚೀನತೆಯ ಸಂಕೇತವಾಗಿವೆ.
No comments:
Post a Comment